ಕೆ.ಆರ್.ಮಾರುಕಟ್ಟೆ (ಕೃಷ್ಣ ರಾಜೇಂದ್ರ ಮಾರ್ಕೆಟ್), ಸಿಟಿ ಮಾರ್ಕೆಟ್ ಎಂದೂ ಕೂಡ ಕರೆಯುತ್ತಾರೆ, ಇದು ಭಾರತದ ಬೆಂಗಳೂರಿನಲ್ಲಿ ಸರಕುಗಳನ್ನು ಹೊಂದಿರುವ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಈ ಮಾರುಕಟ್ಟೆಯು ಮೈಸೂರು ರಸ್ತೆಯ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಗೆ ಸಮೀಪವಿರುವ ಕಲಾಸಿಪಾಳ್ಯಾ ಪ್ರದೇಶದಲ್ಲಿ ಕೃಷ್ಣಾರಾಜೇಂದ್ರ ರಸ್ತೆಯ ಜಂಕ್ಷನ್ನಲ್ಲಿದೆ. ಏಷ್ಯಾದಲ್ಲಿನ ದೊಡ್ಡ ಪುಷ್ಪ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿರುವ ಏಷ್ಯಾದಲ್ಲಿ ಮೊದಲ ಪ್ರದೇಶವಾಗಿದೆ. == ಇತಿಹಾಸ == 1928 ರಲ್ಲಿ ಕೆ.ಆರ್. ಮಾರುಕಟ್ಟೆ ಸ್ಥಾಪಿಸಲಾಯಿತು. ಮಾರುಕಟ್ಟೆಯ ಸ್ಥಳವು ನೀರಿನ ಟ್ಯಾಂಕ್ ಮತ್ತು 18 ನೇ ಶತಮಾನದಲ್ಲಿ ಆಂಗ್ಲೊ-ಮೈಸೂರು ವಾರ್ಸ್ ಸಮಯದಲ್ಲಿ ಯುದ್ಧಭೂಮಿಯಾಗಿತ್ತು. ಬ್ರಿಟಿಷ್ ಯುಗದಿಂದ, ಎರಡು ಕಟ್ಟಡಗಳು ಮಾರುಕಟ್ಟೆ ಪ್ರದೇಶದ ಮುಂಭಾಗ ಮತ್ತು ಹಿಂಭಾಗದಲ್ಲಿ ಉಳಿದಿವೆ.3-ಮಹಡಿ ಕಟ್ಟಡವನ್ನು 1990 ರ ದಶಕದಲ್ಲಿ ಎರಡು ಹಳೆಯ ಕಟ್ಟಡಗಳ ನಡುವೆ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಯಿತು. ಭೂಗತ ಪಾರ್ಕಿಂಗ್ ,ನೆಲದ ಮೇಲೆ ಹೂಗಳು ಮತ್ತು ತರಕಾರಿಗಳು ಮಾಡಲು, ಯಂತ್ರೋಪಕರಣಗಳ ಸೌಲಭ್ಯ ಕಲ್ಪಿಸಲಾಗಿದೆ. == ಸಂಚಾರ ಸೇವೆ == ಕೆ. ಆರ್. ಮಾರ್ಕೆಟ್ ನಿಂದ ಮೆಟ್ರೋ ಸೇವೆ,ಬಸ್ ಸೇವೆ(ಬಿಎಂಟಿಸಿ ನಗರ ಸೇವೆ ,ಮತ್ತು ಕೆಎಸ್ಆರ್ಟಿಸಿ ಹೊರ ಪ್ರದೇಶಗಳಿಗೆ) ಸಂಚಾರ ಸೇವೆಯನ್ನು ನೀಡುತ್ತವೆ.3 ಕಿ.ಮಿ ಅಂತರದಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವಿದೆ. == ಗ್ಯಾಲರಿ == == ಬಾಹ್ಯ ಕೊಂಡಿಗಳು == == ಉಲ್ಲೇಖಗಳು ==